ಮನ ಮೆಚ್ಚಿದ ಹುಡುಗಿ - ೧೯೮೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಚಿನ್ನೆಗೌಡ. ಈ ಚಿತ್ರವು ಕುಂ.ವೀರಭದ್ರಪ್ಪ ರವರ 'ಬೇಟೆ' ಕಾದಂಬರಿಯ ಮೇಲೆ ಆಧಾರವಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿಯವರು ಹಾಡಿದ್ದಾರೆ. == ಪಾತ್ರ == ಡಾ.ಶಿವರಾಜ್ ಕುಮಾರ್ ಸುಧಾರಾಣಿ ಸುಂದರ್ ಕೃಷ್ಣ ಅರಸ್ ಎನ್.ಎನ್.ಸಿಂಹ ಭಟ್ಟಿ ಮಹದೇವಪ್ಪ ಶಿವಪ್ರಕಾಶ್ ಪಾಪಮ್ಮ